Thursday, December 6, 2018

ಗೋಲಿಯಾಟ

ಗೋಲಿಯಾಟ

ಆಟವ ಬಯಸದ ಆಡಲಾಶಿಸದ 
ಮನಸುಂಟೆ ಹೇಳ್ ವಯಸುಂಟೆ 
ಮನವನು ಕವಿದ ಚಿಂತೆಗೆ
ದೇಹಕಾದ ಆಯಾಸಕೆ 
ಹೊಡಿ ಗೋಲಿ ಬಾ ಬಿಡು ಗೋಲಿ

ತಿಳಿದಿದೆ ನಮಗೆ ಕಳೆದಿದೆ ಬಾಲ್ಯ
ಮರೆತಿದೆ ಮನಸು ಆಗಿನ ಲಾಸ್ಯ
ಕಳೆದುದ ಪಡೆಯಲು ನಾವ್ ಪುರುವಲ್ಲ 
ಚಿಕ್ಕವರಾಗಲು ನಾಚಿಕೆ ಸಲ್ಲ 
ಹೊಡಿ ಗೋಲಿ ಬಾ ಬಿಡು ಗೋಲಿ

ಯಾರೇನನ್ನಲಿ ಅಂಜಿಕೆ ಯೇಕೆ 
ಇತರರ ಕೊಂಕಿಗೆ ಗಮನವು ಬೇಕೆ
ಮರಳದು ಮತ್ತೆ ಇನ್ನೀ ಸಮಯ 
ಬಾಲ್ಯಕೆ ಮರಳಲು ತಪಿಸದೆ ಹೃದಯ 
ಹೊಡಿ ಗೋಲಿ ಬಾ ಬಿಡು ಗೋಲಿ