Monday, September 2, 2024

ಪ್ರತ್ಯುತ್ತರ

 

ಇತ್ತು ಅದಿತ್ತು ತನ್ನ ಪಾಡಿಗೆ ತಾನಿತ್ತು 
ಶಮೀಕ ಕಾನನದೆ ತಪಗೈವಂತೆ 
ಜೀವಜಗವನ್ನೆಲ್ಲ ಕಾಪಿಡುತಲಿತ್ತು
ಸುಧೆಯೂಡುತಿತ್ತು ಮುದ ನೀಡುತಿತ್ತು 
ಬೆಳೆಯುತಿತ್ತು ಬೆಳೆಸುತಿತ್ತು ಬಳಕೆಗೂ
ಒದಗುತಿತ್ತು ಬೇಕಿದ್ದನೊದಗಿಸುತಿತ್ತು 
ಅತ್ಯಾಶೆಯೊಡಲ ನರ ಕಾಲಿಡುವವರೆಗೂ 
ಬಂದವನು ತನ್ನ ತಾ ಅರಸನೆಂದುಕೊಂಡ 
ಕಂಡಿದ್ದೆಲ್ಲವನು ಕಡಿದುಂಡ ಕೊಂದುಂಡ 
ಸ್ವಾರ್ಥ ಕ್ಷುಧೆ ತೃಷ್ಣೆ ತೀರದಾಗ ಸತ್ತ ಹಾವ 
ಮುನಿಕೊರಳ್ಗಗಿತ್ತು ವಿವೇಕ ಮರೆದ ಜೀವ
ಎಲ್ಲವನು ಎಲ್ಲ ಸಮಯದೊಳ್ ತಾಳ್ವ 
ಸಹನೆ ಯಾರಿಗೂ ಇಲ್ಲ ಸಲ್ಲ ಅವಶ್ಯವಿಲ್ಲ 
ಶಮೀಕಸುತ ತಂದೆಯಿಂದುಪಕೃತನಿರ್ದ 
ಅಪ್ಪನ ಸ್ಥಿತಿ ನೋಡಿ ಉರಿದೆದ್ದು ಕಿಡಿಕಾರ್ದ 
ಸಗ್ಗದಂತಿರ್ದ ನಿಸರ್ಗವ ಮಸಣಿಸಿದವ 
ಶಪಿಸುತಿನ್ನೇಳು ದಿನದಲಿ ಮರಣಿಸಲಿ 
ಮತ್ತದೇ ಮರುಕಳಿಸಿದೆ ನರನಾಟ ಮೀರಿದೆ 
ಪ್ರಕೃತಿ ಮುಳಿದಿದೆ ಲೆಕ್ಕವಿಡದೆ ನಡೆಸಿದೆ 
ನಡೆಯುತ್ತಲಿದೆ ಜೀವಂಗಳಾಪೋಶನ 


0 Comments:

Post a Comment

Subscribe to Post Comments [Atom]

<< Home