ಉಡುಗೊರೆ
ಹಿಂದೆ ನಮ್ಮನಾಳಿದ ರಾಜ ಮಹಾರಾಜರುಗಳೇ ನೀಡಿದ ಸಮೃದ್ಧ ರಾಷ್ಟ್ರ ನಮಗಿತ್ತ ಉಡುಗೊರೆ.
ನಮ್ಮ ಸಂಪತ್ತನ್ನು ಕಂಡು ಕರುಬಿ ಆಕ್ರಮಿಸಿ ಲೂಟಿಗೈದು ಬಡ ರಾಷ್ಟ್ರವನ್ನು ನಮಗಿತ್ತ ಉಡುಗೊರೆ
ಧನಕನಕವಲ್ಲದೇ ನಮ್ಮ ಮನೆಯ ಹೆಣ್ಗಳನೂ ಅತ್ಯಾಚಾರಗೈದು ಕೊಂದುದೇ ಅವರಿತ್ತ ಉಡುಗೊರೆ
ಆಂಗ್ಲರು ವಣಿಕರಾಗಿ ಬಂದು ಧನಿಕರಾಗಿ ಮೆರೆದು ನಮ್ಮ ಹೀನಾಯವಾಗಿ ಕಂಡುದೇ ಉಡುಗೊರೆ
ದೇಶವ ಕತ್ತಲೆಯಲಿಟ್ಟದ್ದೇ ಕೀಳರಿಮೆ ಬಿತ್ತಿದ್ದೇ ತಾವು ಮಾತ್ರ ಬೆಳೆದದ್ದೇ ದೇಶಕವರಿತ್ತ ಉಡುಗೊರೆ
ನಮಗಾಗಿ ನಾವು ಬಾಳುತ್ತ ನಾವು ನಮ್ಮಿಂದೇನಾಗದೆನುವ ಭಾವ ನಾವು ದೇಶಕ್ಕಿಟ್ಟ ಉಡುಗೊರೆ
ಇಷ್ಟೆಲ್ಲಾ ಇದ್ದರೂ ಬೇಜವಾಬ್ದಾರಿ ರಾಜಕಾರಣಿಯ ಭಾಷಣಕೆ ಚಪ್ಪಾಳೆ ನಾವೀವ ಉಡುಗೊರೆ
ಪ್ರಜಾಪ್ರಭುತ್ವದ ಅತಿದೊಡ್ಡ ಮೋಸವೀ ಹಲರ ಮತವಿರದೀ ಚುನಾವಣೆ ಬಲು ದೊಡ್ಡುಡುಗೊರೆ
ಕರ್ತವ್ಯ ಮರೆತು ಹಕ್ಕಿಗೆ ಹೋರಾಡುತ ನಮ್ಮ ದೇಶವ ನಾವೇ ಹೀನೈಸುವುದು ನಮ್ಮುಡುಗೊರೆ
ಮತ ನೀಡದೇ ಆ ರಜೆಯಲಿ ಮೋಜುಗೈದು ಹೆಮ್ಮೆ ಪಡುವುದು ಬಹ ಪೀಳಿಗೆಗೆ ನಮ್ಮುಡುಗೊರೆ
ಹೀನ ಆಮಿಷಕೆ ಘನರಾಷ್ಟ್ರ ಬಲಿಯ ಮೂರ್ಖತನ ನಾವೇ ವಿನಿಮಯಿಸಿಕೊಂಬ ಉಡುಗೊರೆ

0 Comments:
Post a Comment
Subscribe to Post Comments [Atom]
<< Home