ಮಕ್ಕಳಿಗೆ ಶೈಕ್ಷಣಿಕ (?) ಪ್ರವಾಸ
ನಾನು ಪ್ರವಾಸ ಹೋಗಿದ್ದು ಒತ್ತಟ್ಟಿಗಿರಲಿ. ಈಗ ಶಾಲಾ ಮಕ್ಕಳಿಗೆ ಪ್ರವಾಸ ಏರ್ಪಡಿಸ್ತೀವಲ್ಲ ಅಲ್ಲಿದೆ ನನ್ನ ಗಮನ.
ನಾನು ಕೆಲಸ ಮಾಡೋದು ಪ್ರತಿಷ್ಠಿತ ಶಾಲೆ ಯೊಂದರಲ್ಲಿ. ಇಲ್ಲಿ ಈಗ್ಗೆ ಎರಡು ವರ್ಷಗಳ ಹಿಂದೆ ಪ್ರತೀವರ್ಷ ಹತ್ತನೇ ತರಗತಿ ಮಕ್ಕಳನ್ನು ಮೂರು ಅಥವಾ ನಾಲ್ಕು ದಿನಗಳ ದೂರದ ಊರಿಗೆ ಕರೆದುಕೊಂಡು ಹೋಗುವ ಸಂಭ್ರಮ ಪ್ರಯಾಸಗಳು ವರ್ಣನಾತೀತ.
ಹೊರಡುವ ದಿನ ನಿಗದಿತ ಸಮಯಕ್ಕೆ ಮುಂಚೆ ಹಣ ಪಾವತಿ ಮಾಡಿ ನೋಂದಾಯಿಸಿಕೊಂಡಿರುವ ಮಕ್ಕಳಲ್ಲಿ ಯಾರೊಬ್ಬರು ಬರದೇ ಹೋದರೂ ಒಂದೋ ಕಾಯಬೇಕು ಇಲ್ಲವೇ ಆ ಮಗುವನ್ನು ಬಿಟ್ಟು ಹೊರಡಬೇಕು.
ಸಮಯಪ್ರಜ್ಞೆ ಇಲ್ಲದ ಪೋಷಕರು. ತಕ್ಕಂತೆ ಮಕ್ಕಳು. ಅಕಸ್ಮಾತ್ ಉಗಿಬಂಡಿ ಯಲ್ಲಿ ಪ್ರಯಾಣ ನಿಶ್ಚಯವಾದರಂತೂ ಕೇಳಲೇ ಬೇಡಿ ನಾವೇನೋ ಕಾಯಬಹುದು. ಆದರೆ ಉಗಿಬಂಡಿ ಕಾದೀತೇ? ಆಗ ನೋಡಬೇಕು ಶಿಕ್ಷಕರ ತೊಳಲಾಟ ಒದ್ದಾಟಗಳನ್ನು. ಅಂಡು ಸುಟ್ಟ ಬೆಕ್ಕಿನಂತೆ ಆಡುತ್ತಿರುತ್ತೇವೆ (ತಾನೇ ಲೇಟಾಗಿ ಬಂದರೂ ನಿಗದಿತ ಸಮಯಕ್ಕೆ ಸರಿಯಾಗಿ ಹೊರಟ ಎಷ್ಟೋ ಅನುಭವ ನನಗಾಗಿದೆ. ಇರಲಿ.)
ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸಿದೆವು. ಯಥಾ ಪ್ರಕಾರ ಕೆಲವು ಪೋಷಕರು ಸುಮಾರು ಒಂದು ಗಂಟೆಗಳಷ್ಟು ತಡವಾಗಿ ತಮ್ಮ ಮುದ್ದಿನ ಮಕ್ಕಳನ್ನು ಕರೆದುಕೊಂಡು ಬಂದರು. ಮುಖದ ಮೇಲೆ ಕಿಂಚಿತ್ತೂ ನಮಗಾಗಿ ಇಷ್ಟೊಂದು ಜನ ಕಾಯುವಂತಾಯಿತಲ್ಲ ಎನ್ನುವ ಪಾಪಪ್ರಜ್ಞೆ ಎಳ್ಳಷ್ಟೂ ಇಲ್ಲ. ಬದಲಾಗಿ ಅದು ತಮ್ಮ ಹಕ್ಕು ಎನ್ನುವ ಮುಖಭಾವ.
ಲಗ್ಗೇಜಿನ ವಿಷಯವಂತೂ ಕೇಳಲೇಬೇಡಿ. ನಾನೇ ಹೇಳಿಬಿಡುತ್ತೇನೆ. ಇನ್ನೇನು ಮರಳಿ ಬರುವುದೇ ಇಲ್ಲ. ಮನೆಖಾಲಿ ಮಾಡಿಕೊಂಡು ಬಂದಿದ್ದಾರೇನೋ ಎನ್ನುವಷ್ಟು. ಬಹಳಷ್ಟು ಜನ ಹುಡುಗಿಯರು ಮತ್ತು ಕೆಲವು ಜನ ಹುಡುಗರದ್ದು ಇದೇ ಹಣೇಬರಹ.
ಅಂತೂ ಇಂತೂ ಪ್ರಯಾಣ ಆರಂಭವಾದೊಡನೆ ಎಲ್ಲಾ ಮಕ್ಕಳಿಗೂ ಸರಿಯಾಗಿ ಸೀಟು ಸಿಕ್ಕಿದೆಯೇ ಅವರ ಲಗ್ಗೇಜುಗಳು ಬಸ್ ಒಳಗೆ ಸೇರಿವೆಯೇ ಎನ್ನುವ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ನಮಗೆ ಶಿಕ್ಷಕರಿಗೆ ಕುಳಿತು ಕೊಳ್ಳಲು ಸೀಟಿಲ್ಲ. ನಮ್ಮದು ಮಹಿಳಾ ಪ್ರಧಾನ ಶಾಲೆಯಾದ್ದರಿಂದ ಪುರುಷರನ್ನು ಮನುಷ್ಯರೆಂದು ಭಾವಿಸುವುದಿಲ್ಲ. ಸುಮಾರು ಇನ್ನೂರರಿಂದ ಇನ್ನೂರಿಪ್ಪತ್ತೈದು ಮಕ್ಕಳ ಮೇಲುಸ್ತುವಾರಿಗೆ ಮೂರು ಜನ ಗಂಡು ಶಿಕ್ಷಕರು. ಎಂಟು ಜನ ಶಿಕ್ಷಕಿಯರು. ಎಂಟೂ ಜನ ಶಿಕ್ಷಕಿಯರಿಗೆ ಸೀಟುಗಳನ್ನು ಮಾಡಿಕೊಡಲಾಗಿದೆ. ಮೂರು ಜನ ಗಂಡು ಶಿಕ್ಷಕರಿಗೆ ಫುಟ್ ಬೋರ್ಡ್ ಮೇಲೇ ಕುಳಿತು ಪ್ರಯಾಣ ಮಾಡುವ ಸೌಭಾಗ್ಯ.
ಅಯ್ಯೋ, ಶಿಕ್ಷಕರು ಕೆಳಗೆ ಕುಳಿತಿದ್ದಾರೆ. ಅವರನ್ನು ಕರೆದು ಜೊತೆಯಲ್ಲಿ ಕುಳ್ಳಿರಿಸಿ ಕೊಳ್ಳೋಣ ಇಲ್ಲವೇ ಜಾಗ ಬಿಟ್ಟು ಕೊಡೋಣ ಎಂದು ಯೋಚಿಸುವ ಒಂದೇ ಒಂದು ಕ್ರಿಮಿಯನ್ನೂ ಊಹಿಸಿಕೊಳ್ಳಬೇಡಿ. ಬದಲಾಗಿ ನಮ್ಮ ದುಡ್ಡಲ್ಲಿ ಬಿಟ್ಟಿ ಪ್ರಯಾಣ ಮಾಡುತ್ತಿರುವವರಿಗೇನು ಮರ್ಯಾದೆ ನೀಡುವುದು ಎನ್ನುವ ಭಾವ. ಇಷ್ಟೆಲ್ಲಾ ಅವಮಾನಗಳ ನಡುವೆ ಎಲ್ಲೋ ಒಬ್ಬರು ಅಥವಾ ಇಬ್ಬರು ಪೋಷಕರು ಆರೋಗ್ಯ ಕಾಪಾಡಿಕೊಳ್ಳಿ ಸಾರ್ ಎನ್ನುವ ಹೃದಯವಂತರು.
ನಿಗದಿತ ಸ್ಥಳವನ್ನು ತಲುಪಿ ಕಾದಿರಿಸಲಾಗಿದ್ದ ಹೋಟೇಲ್ ಗೆ ಕಾಲಿಟ್ಟು ಎಲ್ಲಾ ಮಕ್ಕಳಿಗೂ ಒಂದು ನೆಲೆ ಕಾಣಿಸಿ ಬರುವ ವೇಳೆಗೆ ನಮಗೆ ಶಿಕ್ಷಕರಿಗೆ ಕೊಠಡಿಗಳೇನೋ ಸಿಕ್ಕವಾದರೂ ಸುಧಾರಿಸಿಕೊಳ್ಳಲು ಬಿಡುವಿಲ್ಲ. ಶಿಕ್ಷಕಿಯರಂತೂ ಮಕ್ಕಳಿಗಿಂತ ಮೊದಲು ತಾವು ರೂಮಿಗೆ ದೌಡಾಯಿಸುವ ತವಕದಲ್ಲಿ ಇರುತ್ತಾರೆ. ಮೊದಲು ಹೆಣ್ಣು ಮಕ್ಕಳಿಗೆ ಮತ್ತು ಶಿಕ್ಷಕಿಯರಿಗೆ ರೂಮ್ ಹಂಚಿಕೆ ಆದಮೇಲೆ ಶಿಕ್ಷಕರಿಗೆ. ಪುಣ್ಯಕ್ಕೆ ಅಲ್ಲಿ ಯಾವ ದುಸ್ಥಿತಿ ಎದುರಾಗಲಿಲ್ಲ.
ಸ್ವಲ್ಪ ಸಮಯದ ಬಳಿಕ ಮಕ್ಕಳನ್ನು ಕರೆದುಕೊಂಡು ಆ ಹೊಸ ಜಾಗದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಸ್ಥಳೀಯ ಗೈಡ್ ಜೊತೆಗೆ ಹೊರಟರೆ ಅನೇಕ ವಿದ್ಯಾರ್ಥಿಗಳ ಜೊತೆಗೆ ಅನೇಕ ಪ್ರೇಮಿಗಳೂ ಕೂಡಾ. ದಿರಿಸೋ ನಮಗೆ ಸಂಸ್ಕಾರವಿದ್ದರೇ ಈ ಮಕ್ಕಳನ್ನು ಕಣ್ಣೆತ್ತಿ ನೋಡಬಾರದು. ಶಾಲೆಯ ಪ್ರಾಂಶುಪಾಲರು ಯಾವ ರೀತಿಯ ದಿರಿಸುಗಳನ್ನು ನಿರ್ಬಂಧಿಸಿದ್ದರೋ ಅದೇ ದಿರಿಸುಗಳನ್ನು ಬೇಕೆಂದೇ ಧರಿಸಿಕೊಂಡು ಓಡಾಡುತ್ತ ಅಪರಿಚಿತರ ಗಮನವನ್ನು ತಮ್ಮೆಡೆಗೆ ಸೆಳೆಯುವ ಹುನ್ನಾರ ಹೊಂದಿದ್ದರೇನೋ ಎನ್ನುವ ಭಾವ ತರಿಸುವ ವರ್ತನೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ದಿರಿಸುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೇಜವಾಬ್ದಾರಿ ಅಮ್ಮಂದಿರನ್ನು ನೋಡಬೇಕೆಂದರೆ ಇಂತಹ ಪ್ರವಾಸಗಳಲ್ಲಿ ಭಾಗಿಯಾಗಬೇಕು. ಇದಕ್ಕೆ ಒಗ್ಗರಣೆ ಎಂಬಂತೆ ಒಬ್ಬ ಶಿಕ್ಷಕಿ " ಐ ಡೋಂಟ್ ಹ್ಯಾವ್ ಎನಿ ಪ್ರಾಬ್ಲಂ ವಿತ್ ದೇರ್ ದಿಸ್ ಕೈಂಡ್ ಆಫ್ ಡ್ರೆಸ್ " ಎಂದಳು. ಆಕೆ ಆಂಗ್ಲ ಭಾಷಾ ಶಿಕ್ಷಕಿ. ನಾನು ತಕ್ಷಣವೇ "ದಿಸ್ ಈಸ್ ನಾಟ್ ಅವರ್ ಹೋಂ ಟುಬಿ ದ ವೇ ಈಚ್ ವನ್ ಲೈಕ್ ಟು ಬಿಹೇವ್ . ವಿ ಟೀಚರ್ಸ್ ಶುಡ್ ಹ್ಯಾವ್ ಮೋರ್ ಮೆಚ್ಯೂರಿಟಿ ಅಂಡ್ ರೆಸ್ಪಾಂನ್ಸಿಬಿಲಿಟಿ." ಎಂದು ಮುಲಾಜಿಲ್ಲದೆ ಅಂದೆ. ಆಕೆಯ ಮುಖ ಚಿಕ್ಕದಾಗಿ ಹೋಗಿತ್ತು.
ನನಗಂತೂ ಕೋಪ ತಡೆಯಲಾರದೆ ಆ ರೀತಿ ದಿರಿಸು ಧರಿಸಿದ್ದ ಹೆಣ್ಣು ಕ್ರಿಮಿಗಳನ್ನು ನಿರ್ದಾಕ್ಷಿಣ್ಯವಾಗಿ ವಾಪಸ್ ರೂಮಿಗೆ ಕಳಿಸಿ ಅವರು ಮೈಮುಚ್ಚುವಂಥ ಬಟ್ಟೆ ತೊಟ್ಟ ಮೇಲೆಯೇ ನಾನು ಮತ್ತು ನನ್ನ ಇಬ್ಬರು ಶಿಕ್ಷಕರು ಸುಮ್ಮನಾಗಿದ್ದು.
ಪ್ರೇಕ್ಷಣೀಯ ಸ್ಥಳಗಳನ್ನು ತಲುಪಿದಾಗ ಸ್ಥಳೀಯ ಗೈಡ್ ಅಲ್ಲಿನ ಸ್ಥಳ ಪುರಾಣ ಮಹಾತ್ಮ್ಯೆ ಗಳನ್ನು ತನಗೆ ತಿಳಿದ ರೀತಿಯಲ್ಲಿ ವಿವರಿಸಲಾರಂಭಿಸಿದಾಗ ಆಸಕ್ತಿಯಿಂದ ಕೇಳಿ ವಿಷಯಗ್ರಹಿಸುವ ಬದಲು ಅವರ ಮಾತಿನ ಶೈಲಿ ಉಚ್ಚಾರಣೆ ಇತ್ಯಾದಿಗಳನ್ನೇ ಗಮನಿಸಿ ತಮಾಷೆ ಮಾಡಿದ್ದಾಯಿತು. ಈ ಮಕ್ಕಳೇನೋ ಪಾಶ್ಚಿಮಾತ್ಯ ಸಂತಾನ ಇಂಗ್ಲೀಷ್ ಭಾಷಾಪ್ರವೀಣರು ಉಳಿದವರು ದಡ್ಡ ಶಿಖಾಮಣಿಗಳೆನ್ನುವಂಥ ಮನೋಭಾವ. ಅದರಲ್ಲೂ ಗಮನವಿಟ್ಟು ತಿಳಿದುಕೊಳ್ಳಲು ಯತ್ನಿಸಿದ ಕೆಲವು ಮಕ್ಕಳಿದ್ದರು ಎಂದರೆ ತಪ್ಪಾಗಲಾರದು..
ಇದೆಲ್ಲಾ ಮುಗಿದು ಒಂದು ದಿನದ ಕಾರ್ಯಕ್ರಮ ಇನ್ನೇನು ಕೊನೆಯಾಗುವ ವೇಳೆಗೆ ಹೋಟೇಲ್ ನಲ್ಲಿ ಊಟದ ಸಮಯ. ಮತ್ತದೇ ಹದಿಹರೆಯದ ಪ್ರೇಮಿಗಳ ದರ್ಶನ. ಅವರ ವಿಚಿತ್ರ ಅಸಹ್ಯ ಹುಟ್ಟಿಸುವ ವರ್ತನೆ. ಡ್ರೆಸ್ ಚೇಂಜ್ ಮಾಡುವ ನೆಪದಲ್ಲಿ ಮತ್ತೆ ಸೀಥ್ರೂ ವಸ್ತ್ರ ಧಾರಣೆ. ಆಡುವಂತಿಲ್ಲ ಅನುಭವಿಸುವಂತಿಲ್ಲ.
ಮಾರನೆಯ ದಿನ ಇನ್ನೊಂದು ಸ್ಥಳ. ಅಲ್ಲಿಯೂ ಇದೇ ವರ್ತನೆ ಪುನರಾವರ್ತನೆ. ನೋಡಿ ನೋಡಿ ಬೇಸತ್ತ ನಾನು ಅಷ್ಟೂ ಜೋಡಿಗಳನ್ನು ಕರೆದು " ಇದು ಶೈಕ್ಷಣಿಕ ಪ್ರವಾಸ ನೀವು ಇಲ್ಲಿಗೆ ಬಂದಿರುವುದು ಹೊಸ ಹೊಸ ವಿಷಯಗಳನ್ನು ಕಲಿಯಲು. ಅದು ಬಿಟ್ಟು ಎಷ್ಟು ಕೆಟ್ಟ ವರ್ತನೆ ತೋರುತ್ತಿದ್ದೀರಿ. ನಿಮಗೆ ಅಷ್ಟು ಕೀಳು ಅಭಿರುಚಿ ಇದ್ದು ಈ ಸಮಯ ನಿಮ್ಮ ಕೀಳು ಅಭಿರುಚಿಗಳನ್ನು ತೀರಿಸಿಕೊಳ್ಳಲು ಸುಸಮಯವೆಂದು ನೀವೆಣಿಸಿದ್ದರೆ ನಿಮ್ಮಂಥ ಮೂರ್ಖರು ಇನ್ನಿಲ್ಲ. ನಿಮ್ಮ ಈ ವರ್ತನೆ ಮರುಕಳಿಸಿದರೆ ನಾನು ನೇರವಾಗಿ ಪ್ರಾಂಶುಪಾಲರಿಗೇ ಫೋನ್ ಮಾಡಿ ಹೇಳುತ್ತೇನೆ . ಹುಡುಗರು ಹುಡುಗರ ಹಾಗೆ ಹುಡುಗರ ಜೊತೆಯಲ್ಲಿ ಹುಡುಗಿಯರು ಹುಡುಗಿಯರ ಹಾಗೆ ಹುಡುಗಿಯರ ಜೊತೆಯಲ್ಲಿ ಇದ್ದರೆ ಬಚಾವ್. ಹುಷಾರ್ " ಎಂದು ಸುಮಾರು ಒಂದು ಗಂಟೆ ಕಾಲ ಕೂಗಾಡಿದ ಮೇಲೆ ಪರಿಸ್ಥಿತಿ ಸ್ವಲ್ಪ ತಹಬಂದಿಗೆ ಬಂದಂತೆ ಅನಿಸಿತ್ತು.
ಆ ದಿನ ರಾತ್ರಿ ಊಟ ಮುಗಿಸಿ ಎಲ್ಲರೂ ಅವರವರ ಕೊಠಡಿಗಳಿಗೆ ತೆರಳಿ ವಿಶ್ರಾಂತಿ ಪಡೆಯಲು ಆರಂಭಿಸಿದೆವು. ಎಂಟು ಜನ ಶಿಕ್ಷಕಿಯರಲ್ಲಿ ಏಳು ಜನ ಆಗಲೇ ತಮ್ಮ ತಮ್ಮ ರೂಮ್ ಗಳನ್ನು ಲಾಕ್ ಮಾಡಿಕೊಂಡು ಬಿಟ್ಟಿದ್ದರು. ಎಂಟನೆಯವಳು ಹೊರಗಿದ್ದಳು. ನಾವು ಮೂರು ಜನ ನಮ್ಮಲ್ಲೇ ಮಾತನಾಡಿಕೊಂಡು ರಾತ್ರಿ ಸ್ವಲ್ಪ ಈ ಮಕ್ಕಳ ಚಲನವಲನಗಳ ಕಡೆ ನಿಗಾ ವಹಿಸಲು ನಿರ್ಧರಿಸಿದೆವು. ಒಬ್ಬರಿಗೆ ಜ್ವರ ಇದ್ದಕ್ಕಿದ್ದಂತೆ ಆರಂಭವಾಗಿ ಅವರು ಮಾತ್ರೆಯೊಂದನ್ನು ನುಂಗಿ ಮಲಗಿಬಿಟ್ಟರು.
ಇನ್ನುಳಿದವರು ನಾವಿಬ್ಬರು. ಹುಡುಗಿಯರ ಕೊಠಡಿಗಳು ಒಂದು ಫ್ಲೋರ್ ಆದರೆ ಹುಡುಗರ ರೂಮ್ ಗಳು ಇನ್ನೊಂದು ಫ್ಲೋರ್. ಸರಿರಾತ್ರಿಯಲ್ಲಿ ಹುಡುಗಿಯರು ಹುಡುಗರ ರೂಮಿಗೆ ಹುಡುಗರ ರೂಮಿಗೆ ಹೋಗಿ ಅಲ್ಲಿಯೇ ಚಿತ್ರ ವಿಚಿತ್ರ ಅವಸ್ಥೆಗಳಲ್ಲಿ ಇರುವುದನ್ನು ಗಮನಿಸಿದ ಮೇಲಂತೂ ಪ್ರವಾಸದಲ್ಲಿ ಈ ಮಕ್ಕಳು ಪಡೆಯುತ್ತಿರುವ " ಶಿಕ್ಷಣ " ಎಂಥದ್ದು ಎನ್ನುವುದು ನಮಗೆ ಮನವರಿಕೆಯಾಯಿತು.
ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಎನ್ನುವಂತೆ ನಮ್ಮ ಮಕ್ಕಳಿಗೆ ಬೇಕಾಗಿದ್ದದ್ದು ಪ್ರವಾಸದ ಹೆಸರಿನಲ್ಲಿ ಸ್ವೇಚ್ಛಾಚಾರ. ಅದಕ್ಕೆ ಶಿಕ್ಷಕಿಯರ ಪರೋಕ್ಷ ಬೆಂಬಲ. (ಅವರಲ್ಲಿ ಒಬ್ಬಳು ಮಾತ್ರ ತುಂಬಾ ಮೆಲುದನಿಯಲ್ಲಿ ನನ್ನ ಬಳಿ ಬೇಸರ ವ್ಯಕ್ತಪಡಿಸಿದರು .) ಮಕ್ಕಳ ದೃಷ್ಟಿಯಲ್ಲಿ ಒಳ್ಳೆಯವರಾಗಬೇಕಲ್ಲ. ನಾವು ಇಂತಹ ಕ್ಷುಲ್ಲಕ ವಿಚಾರಗಳಿಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಶಾಲೆ ಬಿಟ್ಟು ಮರಳಿ ಮಕ್ಕಳು ತಮ್ಮ ಮನೆ ಸೇರುವವರೆಗೆ ಅವರ ಸಂಪೂರ್ಣ ಸರ್ವ ರೀತಿಯ ಜವಾಬ್ದಾರಿ ನಮ್ಮದೇ ಎಂದು ಭಾವಿಸಿ ಅದರಂತೆಯೇ ನಡೆದವರು. ಆದಕಾರಣ ಮಕ್ಕಳಿಗೆ ನಮ್ಮನ್ನು ಅದರಲ್ಲೂ ವಿಶೇಷವಾಗಿ ನನ್ನನ್ನು ಕಂಡರೆ ಕೋಪ. ನಾನೂ ಇದಕ್ಕೆಲ್ಲಾ ಕ್ಯಾರೇ ಎಂದವನಲ್ಲ.
ಪ್ರತಿ ಬಾರಿ ಈ ಸೋ ಕಾಲ್ಡ್ ಶೈಕ್ಷಣಿಕ ಪ್ರವಾಸ ಹೊರಟಾಗಲೂ ಇಂಥದೇ ಅನುಭವಗಳಾಗಿರುವುದರಿಂದ ಯಾವ ಘನ ಉದ್ದೇಶದಿಂದ ಪ್ರವಾಸ ಏರ್ಪಡಿಸುತ್ತೇವೆಯೋ ಆ ಉದ್ದೇಶ ಕೆಲವು ಮಕ್ಕಳಿಗೆ ಮಾತ್ರ ನೆರವಾಗುತ್ತದೆ. ದುರದೃಷ್ಟಕರ ಎಂದರೆ ಅಂಥಾ ಮಕ್ಕಳ ಸಂಖ್ಯೆ ಬೆಳೆಣಿಕೆಯಷ್ಟು.
ಅದಕ್ಕಾಗಿಯೇ ಎರಡು ವರ್ಷಗಳಿಂದೀಚೆಗೆ ಕೇವಲ ಒಂದು ದಿನದ ಪ್ರವಾಸ. ಬೆಳಿಗ್ಗೆ ಮುಂಚೆ ಊರು ಬಿಟ್ಟು ರಾತ್ರಿ ಮರಳಿದರೆ ಮುಗಿಯಿತು. ಮಕ್ಕಳು ಕಲಿತವೋ ಇಲ್ಲವೋ ನಾವಂತೂ ಬಹಳಷ್ಟು ಕಲಿತಿದ್ದೇವೆ. ಕಲಿಯುತ್ತಿದ್ದೇವೆ
ಎಲ್ಲಾ ರೀತಿಯ ವ್ಯವಸ್ಥೆ ಇರುವ ಬೆರಳ್ತುದಿಯಲ್ಲಿ ಮಾಹಿತಿ ಪಡೆವ ಧನಮದದಿಂದ ಬಳಲುತ್ತಿರುವ ಶ್ರೀಮಂತ ಕುಟುಂಬದ ಮಕ್ಕಳು ಕಲಿಯುವುದು ಅದೂ ಪ್ರವಾಸದಿಂದ ಕಲಿಯುವುದು ಕನ್ನಡಿಯೊಳಗಣ ಗಂಟು.

0 Comments:
Post a Comment
Subscribe to Post Comments [Atom]
<< Home