ಅದ್ದೂರಿ ಮದುವೆಗಳ ಅವಶ್ಯಕತೆ
ಮದುವೆ ಅವಶ್ಯಕತೆ ವಿಷಯಕ್ಕೆ ಬಂದರೆ ಬೀಚಿಯವರ ಮಾತಿನಂತೆ ಒಂದೋ ಮದುವೆಯಾಗಬೇಕು ಇಲ್ಲ ಸುಖವಾಗಿರಬೇಕು. ಮದುವೆಯಲ್ಲಿ ಹರಸುತ್ತಾರಲ್ಲ ವಿಷ್ ಯೂ ಹ್ಯಾಪಿ ಮ್ಯಾರೀಡ್ ಲೈಫ್ ಅಂತ. ಅದೊಂದು ದೊಡ್ಡ ಪ್ರಮಾಣದ ಸುಳ್ಳೆಂಬ ಸತ್ಯ ಸ್ವಾನುಭವವೇದ್ಯ.
ಅದ್ದೂರಿ ಮದುವೆಗಳಾ ?
ಎಲ್ಲಿ ?
ಒಂದೇ ಒಂದು ಮದುವೆಯೂ ಅದ್ದೂರಿಯಲ್ಲ.
ಯಾರ ಪ್ರಕಾರ ?
ಖರ್ಚು ಮಾಡಲು ಶಕ್ತಿ, ಯೋಗ್ಯತೆ ಇರುವ ಯಾವುದೇ ವ್ಯಕ್ತಿಯ ಪ್ರಕಾರ.
ಅದ್ಧೂರಿ ಮದುವೆ
ಯಾರ ಪ್ರಕಾರ ?
ಆ ಮದುವೆಗೆ ಭೇಟಿ ನೀಡುವ ಅತಿಥಿಗಳ ಪ್ರಕಾರ ಯಾ ಅಷ್ಟು ಖರ್ಚು ಮಾಡಲು ಶಕ್ತಿ ಇರದವರ ಪ್ರಕಾರ , ಹೊರಗೆ ನಿಂತು ನೋಡುವವರ ಪ್ರಕಾರ, ಕಾರ್ಯಕ್ರಮ ಆದ ಮೇಲೆ ಕಸದ ರಾಶಿಯನ್ನು ಎತ್ತಲು ಬರುತ್ತಾರಲ್ಲಾ ಅವರ ಪ್ರಕಾರ.
ಆರು ದೋಸೆ ಕೊಟ್ಟರೆ ಅತ್ತೆ ಕಡೆ, ಮೂರು ದೋಸೆ ಕೊಟ್ಟರೆ ಸೊಸೆ ಕಡೆ ಎನ್ನುವ ಬುದ್ಧಿ ಜೀವಿಗಳ ಪ್ರಕಾರ ಖಂಡಿತಾ ಅಲ್ಲ. ಏಕೆಂದರೆ ಕಾರ್ಯಕ್ರಮದ ಪರವಾಗಿಯೇ ಮಾತನಾಡಿ ಸಮರ್ಥಿಸಬೇಕೆಂದು ಅವರಿಗೆ ತಾಕೀತು ಗೌರವ(?) ಧನ, ಕಾಣಿಕೆಗಳ ಮೂಲಕ ಆಗಿರುತ್ತದೆ. ಹಾಗಾಗಿ ಶ್ರೀಮಂತರು ಮಾಡುವ ಮದುವೆ ಅದ್ದೂರಿ ಅಲ್ಲ.
ಇಷ್ಟಾಗಿ ಅದ್ದೂರಿ ಮದುವೆಯ ಮೇಲೇಕೆ ನಮ್ಮೆಲ್ಲರ ಕಣ್ಣು? ಏಕೆ ಆಗ ಮಾತ್ರ ಮೌಲ್ಯಗಳನ್ನು ಎತ್ತಿ ಹಿಡಿದು ಮಾತಾಡುತ್ತೇವೆ?
ಕಾರಣಗಳು ಹೀಗಿರಬಹುದೇ?
೧. ನಮಗೆ ಹಾಗೆ ಮಾಡಲು ಶಕ್ತಿ ಇಲ್ಲ
೨. ನಮಗೆ ಹಾಗೆ ಮಾಡಲು ದಮ್ಮಿಲ್ಲ.
೩. ನಾವೇ ಕಷ್ಟಪಟ್ಟು ದುಡಿದು ಕೂಡಿಟ್ಟು ಕೊಂಡ ಹಣದ ಮೇಲೆ ಸಾಕಷ್ಟು ರೂಪುರೇಷೆ ಸಿದ್ಧ ಪಡಿಸಿ ಕೆಲಸ ಕೊಡದಿದ್ದರೂ ಗಳಿಸಿದ ಗಳಿಕೆಗೆ ತೆರಿಗೆ ಅಧಿಕಾರಿಗಳ ಕಣ್ಣು ಬಿದ್ದು ಎಲ್ಲಿ ಸಮಸ್ಯೆ ಅನುಭವಿಸಬೇಕೋ ಎಂಬ ಅವ್ಯಕ್ತ ಭಯ.
೪. ನಾವು ಅನಾಥರು. ಅಂದರೆ ಅಪ್ಪ ಅಮ್ಮ ಇಲ್ಲದೇ ಅಲ್ಲ. ಅವರಿದ್ದೂ ಅನಾಥರು. ಹೇಗೆಂದರೆ ಏಕೆಂದರೆ ಇಂದಿನ ದಿನಗಳಲ್ಲಿ ಯಾರಿಗೆ MLA, MP, ಮಂತ್ರಿಗಳು ಪರಿಚಯ ಇಲ್ಲ ಅವರೆಲ್ಲ ಅನಾಥರೇ. ಆ ಸಾಲಿನಲ್ಲಿ ನಾವೂ ಇದ್ದೇವೆ.
ನಿಜವಾಗಿಯೂ ಆದರ್ಶಗಳನ್ನು ಪ್ರೀತಿಸುವ, ಪಾಲಿಸುವವರು ಮಾತ್ರ ಯಾವ ರೀತಿಯಲ್ಲೂ ಅದ್ದೂರಿ ಮದುವೆ ಮಾಡುವುದಿಲ್ಲ
ನಾನೊಂದು ಅದ್ದೂರಿ ಮದುವೆಯಲ್ಲಿ ಭಾಗವಹಿಸಿದ್ದೆ.
ಆ ಮದುವೆಯಲ್ಲಿ ಯಾರೂ ಉಡುಗೊರೆ ತರುವಂತಿಲ್ಲ . ಕೊಡುವಂತಿಲ್ಲ. ಪಡೆಯುವಂತಿಲ್ಲ.
ಮದುವೆ ನಡೆದ ದಿನಗಳೆಲ್ಲೆಲ್ಲಾ ಭರ್ಜರಿ ರುಚಿಕರವಾದ ಖಾದ್ಯಗಳ ಔತಣ.
ಯಾರಿಗೆ ?
ರಸ್ತೆಯ ಬದಿಯಲ್ಲಿ ಬೇಡುವ ನಿಜವಾಗಿಯೂ ಕೈಲಾಗದವರೆಂದು ಪರೀಕ್ಷಿಸಿ ಗುರುತಿಸಿ ಇಟ್ಟುಕೊಂಡವರಿಗೆ.
ಖಾದ್ಯಗಳ ತಯಾರಿ ಮತ್ತು ವಿತರಣೆ ಖರ್ಚು ?
ನಯಾಪೈಸೆ ಇಲ್ಲ.
ಯಾಕೆ ?
ಗಂಡು ಹೆಣ್ಣು ಗಳ ಈ ಸದುದ್ದೇಶ ತಿಳಿದ ಕೇಟರರ್ಸ್ ಒಂದೇ ಒಂದು ಪೈಸೆ ಮುಟ್ಟಲೂ ಒಪ್ಪಲಿಲ್ಲ. ಆದರೂ ಮದುವೆಯ ಜೋಡಿ ಎಷ್ಟು ಖರ್ಚು ಬರಬಹುದು ಎಂಬ ಲೆಕ್ಕಾಚಾರ ಹಾಕಿ ಆ ಹಣವನ್ನು ಚೆಕ್ ರೂಪದಲ್ಲಿ ನೀಡಲು ತಯಾರಾಗಿ ಇದ್ದರು.
ಕಾರ್ಯಕ್ರಮ ಮುಗಿಯಲೆಂದು ಕಾಯುತ್ತಿದ್ದರು.
ಕಾರ್ಯಕ್ರಮ ಮುಗಿಯಿತು. ಎಲ್ಲೂ ಒಂದೇ ಒಂದು ಎಲೆಯಾಗಲೀ ನೀರಿನ ಲೋಟವಾಗಲೀ ಕುಪ್ಪೆಯಾಗಲೇ ಇಲ್ಲ.
ಕಾರಣ ಬಡಿಸಲು ಬಳಸಿದ ತಟ್ಟೆ ಲೋಟ ಚಮಚೆಗಳೂ ಕೂಓಡಾ ಖಾದ್ಯಯೋಗ್ಯ.
ಇಷ್ಟಾದರೂ ತಿಳಿಯದೇ ಹೊರ ಚೆಲ್ಲಿದ ತಟ್ಟೆ ಲೋಟಗಳನ್ನು ಕಲೆಹಾಕಿ ತೊಳೆದು ಸ್ವಚ್ಛ ಪಡಿಸಿ ಮರುಬಳಕೆಗೆ ಸಿದ್ಧಪಡಿಸಲಾಯ್ತು.
ನೂರಾರು ಮಂದಿ ಊಟ ಮಾಡಿದರು. ಆ ನೂರಾರು ಮಂದಿ ಕೂಡಾ ಹಸಿವಿನ ಬೆಲೆ ತಿಳಿದವರೇ ವಿನಃ ಬಂದ ಅತಿಥಿಗಳಲ್ಲ.
ಆಹ್ವಾನಿತರಾರಿಗೂ ಊಟದ ವ್ಯವಸ್ಥೆ ಇಲ್ಲ. ಬೇಕಿದ್ದರೆ ಸ್ವಯಿಚ್ಛೆಯಿಂದ ಹಸಿದವರಿಗೆ ಬಡಿಸಬಹುದು. ಬಲವಂತವಿಲ್ಲ.
ಮೂರ್ನಾಲ್ಕು ದಿನಗಳ ಕಾಲ ಮದುವೆ ನಡೆದರೂ ಎಲ್ಲಿಯೂ ಚಪ್ಪರ ತೋರಣಗಳ ಬಳಕೆಯಿಲ್ಲ. ಮದುವೆ ನಡೆದದ್ದು ವೃಕ್ಷಗಳ ಸಮ್ಮುಖದಲ್ಲಿ. ಅದೂ ನೂರಾರು ಮಂದಿ ಎದುರು.
ಮದುವೆಗೆ ಮಂತ್ರ ಹೇಳಿದ ಜೋಯಿಸರೂ ಒಂದು ನಾಣ್ಯ ದಕ್ಷಿಣೆ ಪಡೆಯಲಿಲ್ಲ. ಆದರೆ ವಧೂವರರು ಅವರ ಸಂಭಾವನೆಯನ್ನೂ ಚೆಕ್ ನಲ್ಲಿ ಸೇರಿಸಿ ಬರೆದರು.
ಎಲ್ಲಿಯೂ ಯಾವ ಕಾರಣದಿಂದಲೂ ಪರಿಸರ ನೈರ್ಮಲ್ಯಕ್ಕೆ ಧಕ್ಕೆಯೂ ಇಲ್ಲ. ಕಸದ ರಾಶಿಯ ಕಾಣಿಕೆಯೂ ಇಲ್ಲ.
ಯಾರ ಬಾಯಲ್ಲೂ ಮನಃಪೂರ್ವಕವಾಗಿ ಮೆಚ್ಚುಗೆ ಮಾತು ಬಿಟ್ಟರೆ ಹಸಿದು ಉಂಡವರಿಂದ ಹೃತ್ಪೂರ್ವಕ ಹಾರೈಕೆ ಬಿಟ್ಟರೆ ಬೇರೆ ನಿಂದನಾತ್ಮಕ ಮಾತುಗಳಿಗೆ ಎಡೆಯೇ ಇರಲಿಲ್ಲ.
ಈ ಅಭೂತಪೂರ್ವ ಮದುವೆಗೆ ಮಂತ್ರಿ ಶಾಸಕರಿಗೆ ರಾಜಕೀಯ ಧುರೀಣರ್ಯಾರಿಗೂ ಆಹ್ವಾನ ಇಲ್ಲ.
ಇಲ್ಲಿ ಬಂದವರೆಲ್ಲ ನಿಜವಾದ ಬಂಧು ಮಿತ್ರರು
ಅಂದಹಾಗೆ ಈ ಮದುವೆ ನಡೆದದ್ದು ಎಲ್ಲಿ?
ತಿಳಿಯಲಿಲ್ಲವೇ?
ನನ್ನ ಕನಸಿನಲ್ಲಿ.😁😁😁😁😁😁

0 Comments:
Post a Comment
Subscribe to Post Comments [Atom]
<< Home