ಗುರುವಿನಡಿದಾವರೆಗಳಿಗೆ
ಸಚ್ಚಿದಾನಂದ ರೂಪಾಯ ಬಿಂದು ನಾದಾಂತರಾತ್ಮನೇ ಆದಿಮಧ್ಯಾಂತ ಶೂನ್ಯಾಯ ಗುರೂಣಾಂ ಗುರುವೇ ನಮಃ
ಅಂತಹ ಗುರುವಿಗೆ ಶಿರಸಾಷ್ಟಾಂಗ ಪ್ರಣಾಮಗಳು
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ।. ಭತ್ತವದನು ವಿಚಾರಯುಕ್ತಿಗಳು ಕುಟ್ಟೆ ॥
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ।. ನಿತ್ಯ ಭೋಜನ ನಮಗೆ - ಮಂಕುತಿಮ್ಮ ॥
ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಬತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿರೂಪದ ತತ್ವವೇ ನಮ್ಮ ಬೌದ್ಧಿಕತೆಗೆ ಆಹಾರ. ಈ ರೀತಿಯ ಆಹಾರ ತಯಾರಿಸಿ ನೀಡುವವನು ಗುರು
ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ
ಅರ್ಚಕನ ಸಾಧನೆ ತಪೋಬಲ ಜ್ಞಾನ ಸಿದ್ಧಿಗಳಿಂದ ಹೇಗೆ ಸಾಮಾನ್ಯ ಕಲ್ಲೊಂದು ಪೂಜಾರ್ಹವಾದ ಮೂರ್ತಿಯಾಗಿ ಬದಲಾಗಿ ಸಹಸ್ರಾರು ಭಕ್ತರನ್ನು ಪೊರೆಯುವ ಬಲ ಹೊಂದುವುದೋ ಅಂತೆಯೇ ಗುರುವಿನ ಪ್ರಭಾವದಿಂದ ಎಂಥಾ ಮಗುವೂ ಲೋಕವಿಖ್ಯಾತರಾಗಿ ಸಾಧಕರಾಗಿ ಬದಲಾಗುತ್ತಾರೆ. ಹೇಗೆ ಅಕ್ಕಸಾಲಿಗ ರತ್ನ ವಜ್ರಗಳನ್ನು ಹುಡುಕುತ್ತಾನೋ ಹಾಗೆಯೇ ಗುರು ಪ್ರತಿಶಿಷ್ಯನಲ್ಲೂ ಆಂತರ್ಯದಲ್ಲಿ ಹುದುಗಿರುವ ಪ್ರತಿಭೆ, ಸದ್ವಿಚಾರ, ಸದ್ವರ್ತನೆಗಳೆಂಬ ರತ್ನೋಪಮ ಗುಣಗಳು ಹುಡುಕಿ ತನ್ಮೂಲಕ ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತನಾಗುತ್ತಾನೆ. ನಮ್ಮಲ್ಲಿ ಅಡಗಿರುವ ಯಾವುದೇ ರೀತಿಯ ಕತ್ತಲೆಯನ್ನು ಕಳೆದು ಅಲ್ಲಿ ಅರಿವಿನ ಬೆಳಕನ್ನು ಹಚ್ಚುವ ಯಾರಾದರೂ ಗುರುವೇ. ಗುರು ಎಂದರೆ ತಿಮಿರದರಿ ಎನ್ನುತ್ತಾರೆ ಬಲ್ಲವರು.
ವರ್ಣ ಮಾತ್ರಂ ಕಲಿಸಿದಾತಂ ಗುರು
ಜಗತ್ತನ್ನೇ ಗುರುವನ್ನಾಗಿ ಭಾವಿಸಿದವನನ್ನು ಜಗತ್ತು ಜಗದ್ಗುರು ಎಂದು ಗೌರವಿಸುತ್ತದೆ. ಅಂದರೆ ಗುರುವೂ ನಿರಂತರ ಜ್ಞಾನಪಿಪಾಸಿಯಾಗಿದ್ದು ಜ್ಞಾನಾರ್ಜನೆಯಲ್ಲಿ ಅಧ್ಯಯನದಲ್ಲಿ ತೊಡಗಿರಲೇಬೇಕು.
ತನ್ನೊಳಗೆ ಕತ್ತಲಿರಿಸಿಕೊಂಡವನು ಗುರುವಾಗಲಾರ. ಬೆಳಕಾಗಲಾರ. ಒಳಗಣ ಅಂಧಕಾರ ಅತಿಯಾದಂತೆ ಸಂಪೂರ್ಣ ಕಣ್ಮರೆಯಾಗುವ ಕ್ಷುದ್ರ ಜೀವಿಯೂ ಆಗಬಲ್ಲ..
ತನ್ನ ತಾನರಿದು ತನ್ನ ತಾ ತರಿದು ತಾನುರಿದು ತಾ ನುರಿದು
ಜಗಕೆಲ್ಲ ಬೆಳಕ ಬದುಕ ನೀಡಲನುವಾದವನು, ಜ್ಞಾನ ಬ್ರಹ್ಮ ಸರಸ್ವತಿಯರೆದುರು ನತಮಸ್ತಕನಾಗಲರಿತವನು, ಸದಾ ಕಲಿಯುವವ , ಮಾತ್ರವೇ ಗುರುವಾಗಬಲ್ಲ.
ಮುಕ್ತಾನಾಂ ಪರಮಾಗತಿಃ ಎನ್ನುವಂತೆ ಗುರು ಮಾತ್ರ ಆ ಮುಕ್ತತ್ವ ಪಥವನ್ನು ಪ್ರಸಾದಿಸಬಲ್ಲ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿ ಇಂದಿಗೂ ಎಂದಿಗೂ ಪ್ರಸ್ತುತ.
ನಮಗೆಲ್ಲಾ ಆ ಸದ್ಗುರುವಿನ ಕರುಣಾಕೃಪಾಕಟಾಕ್ಷ ನಿರಂತರವಾಗಿ ಲಭಿಸುತ್ತಿರಲಿ.
ಗುರು ಜ್ಞಾನ ಸಾಗರ ವಾದರೆ ಶಿಷ್ಯ ಜ್ಞಾನ ದಾಹ ಸಾಗರ. ಗುರುಶಿಷ್ಯರ ಸಮಾಗಮ ಎರಡು ಸಾಗರಗಳ ಸಮಾಗಮ.
ಗುರು ಹೀಗಿದ್ದಲ್ಲಿ ಶಿಷ್ಯ ಹೇಗಿರಬೇಕು ಎನ್ನುವ ಜಿಜ್ಞಾಸೆ ಮೂಡುವುದು ಸಹಜ. ಶಿಷ್ಯ ಗುರು ಗೋವಿಂದ ಭಟ್ಟರ ಶಿಷ್ಯ ಶಿಶುನಾಳ ಷರೀಫರಂತೆ ಇರಬೇಕು. ಅದರೊಟ್ಟಿಗೆ ತನ್ನ ಗುರುವನ್ನು ಪರೀಕ್ಷೆಗೊಳಪಡಿಸಿಯೇ ನಂತರ ಗುರುವಾಗಿ ಸ್ವೀಕರಿಸಿದ , ನಂತರ ಒಮ್ಮೆ ಗುರುವೆಂದು ಒಪ್ಪಿ ಸ್ವೀಕರಿಸಿದ ಮೇಲೆ ನಿಶ್ಶ್ಯಂಕಿತನಾಗಿ ಮುಂದುವರೆದ ಈ ದೇಶ ಕಂಡ ಮಹಾನ್ ಚೇತನ ವೀರಸನ್ಯಾಸಿ ವಿವೇಕಾನಂದ ರಂತೆಯೂ ಇರಬೇಕು. ಒಮ್ಮೆ ಗುರುವಾದವನು ಎಂದಿಗೂ ಗುರುವೇ. ಅದೇ ರೀತಿ ಒಮ್ಮೆ ಶಿಷ್ಯನಾದವನು ಮತ್ತೆಂದೂ ಆ ಗುರುವಿಗೆ ಶಿಷ್ಯನೇ.
ಕಲಿಯಬಲ್ಲಾತಂಗೆ ಶಿಲೆಕೂಡ ಗುರುವಾಯ್ತು ಕಲಿಯಲಾರದವಂಗೆ ಗುರುವೇ ಶಿಲೆಯಾದ ಎನ್ನುವಂತಾಗಬಾರದು.

0 Comments:
Post a Comment
Subscribe to Post Comments [Atom]
<< Home