ಗೋಲಿಯಾಟ
ಗೋಲಿಯಾಟ
ಆಟವ ಬಯಸದ ಆಡಲಾಶಿಸದ
ಮನಸುಂಟೆ ಹೇಳ್ ವಯಸುಂಟೆ
ಮನವನು ಕವಿದ ಚಿಂತೆಗೆ
ದೇಹಕಾದ ಆಯಾಸಕೆ
ಹೊಡಿ ಗೋಲಿ ಬಾ ಬಿಡು ಗೋಲಿ
ತಿಳಿದಿದೆ ನಮಗೆ ಕಳೆದಿದೆ ಬಾಲ್ಯ
ಮರೆತಿದೆ ಮನಸು ಆಗಿನ ಲಾಸ್ಯ
ಕಳೆದುದ ಪಡೆಯಲು ನಾವ್ ಪುರುವಲ್ಲ
ಚಿಕ್ಕವರಾಗಲು ನಾಚಿಕೆ ಸಲ್ಲ
ಹೊಡಿ ಗೋಲಿ ಬಾ ಬಿಡು ಗೋಲಿ
ಯಾರೇನನ್ನಲಿ ಅಂಜಿಕೆ ಯೇಕೆ
ಇತರರ ಕೊಂಕಿಗೆ ಗಮನವು ಬೇಕೆ
ಮರಳದು ಮತ್ತೆ ಇನ್ನೀ ಸಮಯ
ಬಾಲ್ಯಕೆ ಮರಳಲು ತಪಿಸದೆ ಹೃದಯ
ಹೊಡಿ ಗೋಲಿ ಬಾ ಬಿಡು ಗೋಲಿ

1 Comments:
ಚೆನ್ನಾಗಿ ಬರೆದಿದ್ದೀರಿ.ಆಡಿದಾತನಿಗೆ ಮಾತ್ರವೇ ಒಲಿಯುವ ಚಾಕಚಕ್ಯತೆ, ಸಮಯೋಚಿತ ಪರಿಜ್ಞಾನ,ಕಾರ್ಯಕ್ಷಮತೆ, ಕ್ರೀಡಾ ಮನೋಭಾವ ಗಳನ್ನು ಗಳಿಸಲು ವಯಸ್ಸಿನಿಂದ ವಿಲ್ಲ.ಗೋಲಿಯನ್ನು ಚೆನ್ನಾಗಿ ಉರುಳಿಸಿದ್ದೀರಿ.
Post a Comment
Subscribe to Post Comments [Atom]
<< Home